ಆದರ್ಶ ಸುಗಮ ಸಂಗೀತ ಅಕಾಡಮಿ
Home About Us Events Photo Gallery Contact Us
stage

ಆದರ್ಶ ಸುಗಮ ಸಂಗೀತ ಅಕಾಡಮಿ

ಸುಗಮ ಸಂಗೀತ ಕ್ಷೇತ್ರದಲ್ಲಿ ವಿಶೇಷ ತರಬೇತಿ ನೀಡುವ ಅವಕಾಶ ವಂಚಿತ ನೈಜ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಿ ತನ್ಮೂಲಕ ಸೂಕ್ತ ವೇದಿಕೆಗಳಲ್ಲಿ ಅವಕಾಶ ಕಲ್ಪಿಸಿ ಅವರುಗಳಲ್ಲಿ ಅಡಗಿರುವ ಪ್ರತಿಭೆ ಹೊರಹೊಮ್ಮಲು ಅವಕಾಶ ಕಲ್ಪಿಸುವ ಸದುದ್ದೇಶದಿಂದ ನಾಡಿನ ಹಿರಿಯ ಸುಗಮ ಸಂಗೀತಗಾರರ ಹಾಗೂ ಹಿರಿಯ ಕವಿ ಲೇಖಕರ ಹೃದಯಪೂರ್ವಕ ಸಹಕಾರದೊಂದಿಗೆ ಆದರ್ಶ ಸುಗಮಸಂಗೀತ ಅಕಾಡಮಿ ದಿನಾಂಕ ೨೫ ಅಗಸ್ಟ್ ೧೯೯೬ರಂದು ಪ್ರಾರಂಭವಾಯಿತು.
    ನಾಡಿನ ಹಿರಿಯ ಜಾನಪದ ವಿದ್ವಾಂಸರೂ ಹಗೂ ಹಿರಿಯ ಸ್ವಾತಂತ್ರ ಹೋರಾಟಗಾರರೂ ಆದ ’ಜಾನಪದಶ್ರೀ’ ಡಾ||ಎಸ್.ಕೆ.ಕರೀಂಖಾನ್ ಅವರು ಅಕಾಡಮಿಯ ಗೌರವಾಧ್ಯಕ್ಷರಾಗಿ ಆಯ್ಕೆಗೊಂಡು ಅಕಾಡಮಿಯ ರೂಪು ರೇಷೆಗಳನ್ನು ಸಿದ್ಧಪಡಿಸಿದರು. ಶ್ರೀಕೊಳದ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಶಾಂತವೀರ ಮಹಾಸ್ವಾಮಿಗಳರವರು ಜ್ಯೋತಿ ಬೆಳಗಿಸುವ ಮೂಲಕ ಅಕಾಡಮಿಯ ಅದ್ಘಾಟನೆಯನ್ನು ನೆರವೇರಿಸಿಕೊಟ್ಟರು. ಗಣಿ ಹಾಗೂ ಭೂವಿಜ್ನಾನ ಖಾತೆಯ ಸಚಿವರಾದ ಶ್ರೀ ಎಸ್.ಡಿ.ಜಯರಾಂರವರು ಅಧ್ಯಕ್ಷತೆ ವಹಿಸಿದ್ದು, ಖ್ಯಾತ ಸುಗಮ ಸಂಗೀತಗಾರರಾದ ಶ್ರೀ ಅಶ್ವಥ್, ಶ್ರೀ ಶಿವಮೊಗ್ಗ ಸುಬ್ಬಣ್ಣ, ಶ್ರೀಮತಿ ರತ್ನಮಾಲಾ ಪ್ರಕಾಶ್, ಶ್ರೀಮತಿ ಮಾಲತಿ ಶರ್ಮ ಮುಂತಾದವರು ಸಮಾರಂಭದಲ್ಲಿ ಗೀತೆಗಳನ್ನು ಹಾಡಿ ಜನಮನ ರಂಜಿಸಿದರು. ಡಾ||ಎಚ್.ಎಸ್.ವೆಂಕಟೇಶ ಮೂರ್ತಿ, ಶ್ರೀ ಎಮ್.ಎನ್.ವ್ಯಾಸರಾವ್, ಶ್ರೀ ಬಿ.ಆರ್.ಲಕ್ಷ್ಮಣರಾವ್ ಅವರುಗಳೂ ಹಾಜರಿದ್ದರು.
    ಡಾ||ಎಸ್.ಕೆ.ಕರೀಂಖಾನ್ ರವರ ಮಾರ್ಗದರ್ಶನದಲ್ಲಿ ಪ್ರಾರಂಭಗೊಂಡು ಮತ್ತೊಂದು ಮಹತ್ವದ ವಿನೂತನ "ನವಸುಮ-ವನಸುಮ" ಕಾರ್ಯಕ್ರಮ ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು. ಪರಿಶಿಷ್ಟಜಾತಿ ಹಾಗು ಪರಿಶಿಷ್ಟಪಂಗಡದ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಹಾಗೂ ಮೂಲ ಜಾನಪದ ಕಲಾವಿದರನ್ನು ಅಕಾಡೆಮಿಗೆ ಆಹ್ವಾನಿಸಿ ತನ್ಮೂಲಕ ಅಕಡೆಮಿಯ ವಿದ್ಯಾರ್ಥಿಗಳಿಗೆ ಮೂಲ ಜಾನಪದ ಧಾಟಿಯನ್ನು ಪರಿಚಯ ಮಾಡಿಕೊಡುವ ಈ ಯೊಜನೆ ಅತ್ಯಂತ ಯಶಸ್ವಿಯಾಗಿ ನಾಲ್ಕು ಹಂತಗಳಲ್ಲಿ ಅನುಷ್ಠಾನಗೊಂಡಿದೆ.
    ಪ್ರತಿಭಾ ಪ್ರದರ್ಶನ ಮಾಲಿಕೆಯಲ್ಲಿ ಮೂರು ತಿಂಗಳಿಗೊಮ್ಮೆ ಅಕಾಡಮಿಯ ಪ್ರತಿಭಾನ್ವಿತ ವಿದ್ಯರ್ಥಿಗಳಿಂದ ನಗರದ ಕನ್ನಡ ಸಾಹಿತ್ಯ ಪರಿಷತ್, ಸುಚಿತ್ರ ಫಿಲ್ಮ್  ಸೊಸೈಟಿ ಸಭಾಂಗಣ, ನಾಲ್ಕನೆ ರಾಷ್ಟ್ರೀಯ ಕ್ರೀಡಾಕೂಟ, ಮಿಥಿಕ್ ಸೊಸೈಟಿ ಸಭಾಂಗಣ, ಮಲ್ಲೆಶ್ವರಂ ಮುಂತಾದ ಕಡೆ ಸಾಂಸ್ಕ್ರಿತಿಕ ಕಾರ್ಯಕ್ರಮವನ್ನು ಏರ್ಪಡಿಸಿ ವಿದ್ಯಾರ್ಥಿಗಳ ಪ್ರತಿಭೆ ಹೊರಹೊಮ್ಮಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯಮಟ್ಟದ ಸುಗಮ ಸಂಗೀತ ಸ್ಪರ್ಧೆಯನ್ನು ಏರ್ಪಡಿಸಿ ಹೊರ ಜಿಲ್ಲೆಯ ಅಭ್ಯರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟು ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಬಹುಮಾನವಾಗಿ ನೀದುವ ಯೋಜನೆಯನ್ನು ಹಮ್ಮಿಕೊಂಡಿದೆ.